ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದಲ್ಲಿ ಪೂಜ್ಯ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳ ನೇತೃತ್ವದಲ್ಲಿ ಹದಿಮೂರು ಕೋಟಿ ರಾಮತಾರಕ ಜಪಯಜ್ಞ ಹದಿಮೂರು ಕುಂಡಗಳಲ್ಲಿ ಪಾಯಸ ಹಾಗು ಆಜ್ಯದ ಆಹುತಿಯಿಂದ ಸಂಭ್ರಮವಾಗಿ ನೆರವೇರಿತು. ಶ್ರೀ ರಾಮನ ಅನುಗ್ರಹದಿಂದ, ಸ್ವಾಮೀಜಿಯವರ ಪ್ರೇರಣೆಯಿಂದ, ಭಕ್ತಾದಿಗಳು 20 ಕೋಟಿಗೂ ಮೀರಿ ರಾಮತಾರಕಮಂತ್ರದ ಜಪವನ್ನು ಮಾಡಿದ್ದರು. ಅಂದಿನ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಅನೇಕ ಊರುಗಳಿಂದ ಬಂದು ಶ್ರೀ ರಾಮನ ಕೃಪೆಗೆ ಪಾತ್ರರಾದರು. ಅಂದು ಶ್ರೀರಾಮಪರಿವಾರಕ್ಕೆ ವಿಶೇಷ ಪೂಜೆ, ವೈದಿಕ ಮಂತ್ರಾಕ್ಷತೆ ಹಾಗೂ ಮಂಗಲೋತ್ಸವ ನಡೆಯಿತು. ಅಂದಿನ ಸಾಯಂಕಾಲ ನಡೆದ ‘ಲವ-ಕುಶ’ ಯಕ್ಷಗಾನ ಭಕ್ತಾದಿಗಳನ್ನೆಲ್ಲ ಮನರಂಜಿಸಿತು.
ಶೋಭಕೃತ್ ಸಂವತ್ಸರದ ಶ್ರೀ ಶಂಕರ ಜಯಂತಿ ಮಹೋತ್ಸವದ ಸಂದರ್ಭದಲ್ಲಿ ಪೂಜ್ಯ ಶ್ರೀ ಸ್ವಾಮಿ ಬ್ರಹ್ಮಾನಂದಭಾರತೀಯವರು ಶ್ರೀ ಶಂಕರ ಭಗವತ್ಪಾದರ ಧನ್ಯಾಷ್ಟಕಮ್ ಗ್ರಂಥದ ಮೇಲೆ ಉಪನ್ಯಾಸ ಮಾಡಿದರು. ಅದರ ಮೊದಲದಿನದ ವೀಡಿಯೋ ಲಿಂಕ್ ಇಲ್ಲಿದೆ.
ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು ದಿನಾಂಕ 24-ಏಪ್ರಿಲ್-2023 ರಂದು ಶಿರಸಿಯ ಯೋಗಮಂದಿರದಲ್ಲಿ ಶ್ಂಕರ ಜಯಂತಿ ಪ್ರಯುಕ್ತವಾಗಿ ಪ್ರವಚನ ನೀಡಿದರು. ಅಂದಿನ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಉಪಸ್ಥಿತರಾಗಿದ್ದರು ಅಂದಿನ ಪ್ರವಚನದ ಲಿಂಕ್ ಇಲ್ಲಿದೆ.
ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು ದಿನಾಂಕ 25-ಏಪ್ರಿಲ್-2023 ರಂದು ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಶಂಕರ ಜಯಂತಿ ಪ್ರಯುಕ್ತವಾಗಿ ಪ್ರವಚನವನ್ನು ನೀಡಿದರು. ಅಂದಿನ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಉಪಸ್ಥಿತರಾಗಿದ್ದಾರುಅಂದಿನ ಪ್ರವಚನದ ಲಿಂಕ್ ಇಲ್ಲಿದೆ.
ಪೂಜ್ಯ ಶ್ರೀ ಬ್ರಹ್ಮಾನಂದ ಸ್ವಾಮಿಗಳು ಶಂಕರಮಠದಲ್ಲಿ ಶಂಕರಾಚಾರ್ಯ-ವಿರಚಿತ ಆತ್ಮಬೋಧ ಗ್ರಂಥದ ಬಗ್ಗೆ ಪ್ರವಚನ ನೀಡಿದರುಪ್ರವಚನದ ಮೊದಲ ದಿನದ ವೀಡಿಯೋ ಲಿಂಕ್ ಇಲ್ಲಿದೆ.
ಪ್ರತಿತಿಂಗಳೂ ನಡೆಯುವ ಮಾಸಿಕ ಸತ್ಸಂಗದ ವೀಡಿಯೊ.ಪ್ರವಚನದ ಮೊದಲ ದಿನದ ವೀಡಿಯೋ ಲಿಂಕ್ ಇಲ್ಲಿದೆ.
ಹನುಮಾನ್ ಚಾಲೀಸಾ ಉಪನ್ಯಾಸದ ವೀಡಿಯೋಗಳ ಲಿಂಕ್ ಇಲ್ಲಿದೆ.
ಶ್ರೀಮದ್ ಭಾಗವತ ಪುರಾಣದ ವೀಡಿಯೋಗಳ ಲಿಂಕ್ ಇಲ್ಲಿವೆ.
ಶ್ರೀದುರ್ಗಾ ಸಪ್ತಶತಿ ವೀಡಿಯೋಗಳ ಲಿಂಕ್ ಇಲ್ಲಿವೆ.
ಭಜಗೋವಿಂದಮ್ ವೀಡಿಯೋಗಳ ಲಿಂಕ್ ಇಲ್ಲಿದೆ.
ಪಾಂಚಜನ್ಯ - ಭಗವದ್ಗೀತೆಯ ಪ್ರವಚನಗಳು ಅಧ್ಯಾಯ 1 - 4. ಲಿಂಕ್ ಇಲ್ಲಿದೆ
ಪಾಂಚಜನ್ಯ - ಭಗವದ್ಗೀತೆಯ ಪ್ರವಚನಗಳು ಅಧ್ಯಾಯ 5 - 7. ಲಿಂಕ್ ಇಲ್ಲಿದೆ .