ಸಮರ್ಥ ಪ್ರಬೋಧ ಜಾಲಪುಟಕ್ಕೆ ನಿಮ್ಮೆಲ್ಲರ ಸ್ವಾಗತ. ಇಲ್ಲಿ ಪೂಜ್ಯ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿಯವರು ನೆಲೆಸಿರುವ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ವಿವರಣೆ, ಅಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ವಿವರಣೆಗಳನ್ನು ಕೊಟ್ಟಿದೆ.

ಅನೇಕ ವರ್ಷಗಳಿಂದಲೂ ಶ್ರೀ ಚೈತನ್ಯ ರಾಜಾರಾಮರು ಪ್ರವಚನಗಳನ್ನು, ಸತ್ಸಂಗಗಳನ್ನು ಆಯೋಜಿಸಿ ಭಕ್ತರನ್ನು, ಸಾಧಕರನ್ನು ಆತ್ಮಜ್ಞಾನಮಾರ್ಗದಲ್ಲಿ ಸರಿಯಾಗಿ ಹೋಗುವಂತೆ ಪ್ರೇರಣ ಮಾಡುತ್ತಿದ್ದರು. ಪೂಜ್ಯ ಶ್ರೀ ಬ್ರಹ್ಮಾನಂದ ಸ್ವಾಮಿಜಿಯವರು ಈ ಕ್ಷೇತ್ರದಲ್ಲಿ ನೆಲೆಸಿದ ಮೇಲೆ ಈ ಕಾರ್ಯವನ್ನು ಮುಂದುವರೆಸುವುದಲ್ಲದೇ ಅದರ ಪ್ರಚಾರವನ್ನು ಇನ್ನೂ ಹೆಚ್ಚು ಜನರಿಗೆ ಸೇರುವಂತೆ ಅಂತರ್ಜಾಲದ ಮೂಲಕ ದೂರಸ್ಥ ಶಿಕ್ಷಣ ಮಾಧ್ಯಮಗಳ ಮೂಲಕ ಮಾಡುತ್ತಿದ್ದಾರೆ. ಸಮರ್ಥ ಪ್ರಬೋಧ ಎಂಬ ಹೆಸರಿನಿಂದ ನಡೆಯುತ್ತಿರುವ ಯು-ಟ್ಯೂಬ್ ವಾಹಿನಿಯಲ್ಲಿ ಪೂಜ್ಯ ಸ್ವಾಮೀಜಿಯವರ ಪ್ರವಚನಗಳ ಪ್ರಚಾರವಾಗುತ್ತಿದೆ. ‘ಸ್ವಾಧ್ಯಾಯಪ್ರವಚನಾಭ್ಯಾಂ ನ ಪ್ರಮದಿತವ್ಯಮ್’ ಎನ್ನುವ ಧ್ಯೇಯವಾಕ್ಯವನ್ನಿಟ್ಟುಕೊಂಡು ಅಲ್ಲಿ ಇನ್ನೂರಕ್ಕೂ ಹೆಚ್ಚು ದೃಶ್ಯಮುದ್ರಣಗಳನ್ನು ಪ್ರಕಾಶಿಸಲಾಗಿದೆ.

ಈ ಜಾಲಪುಟದಲ್ಲಿರುವ ವಿವರಣೆಗಳನ್ನು ಉಪಯೋಗಿಸಿ ನಿಮ್ಮೆಲ್ಲರ ಶ್ರವಣ, ಮನನ, ನಿಧಿಧ್ಯಾಸನ ಸುಗಮವಾಗಿ, ಸಫಲವಾಗಿ ಆತ್ಮಜ್ಞಾನವನ್ನು ಪಡೆಯಿರಿ ಹಾಗೂ ಎಂದೆಂದಿಗೂ ನಿಮ್ಮ ಮೇಲೆ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀ ರಾಮನ ಅನುಗ್ರಹವಿರಲಿ.